Pages

Sunday, May 15, 2011

IT harate

ಹೌದು, ಇದು ಸೋಮಾರಿ ಕಟ್ಟೆ ಹರಟೇನೆ, ಆದ್ರೆ ನಾವು ಅಇಟಿ-ಬಿಟಿನೋರು, ಇವರಿಗೆಲ್ಲಿ ಕಟ್ಟೆ ಅಂದ್ಕೋಬೇಡಿ, ನಮಗೂ ಕಟ್ಟೆ ಕಟ್ಟಿಸಿದ್ದಾರೆ, ಅದೂ ಅಪೀಸ್ನಲ್ಲೇ , ಕಟ್ಟೆ ಹತ್ರ ಪ್ರೀಯಾಗಿ ಕಾಪಿನೂ ಕೊಡ್ತಾರೆ.



ತಪ್ಪು ತಿಳ್ಕೊಬೇಡಿ, ನಾನು ಹರಟೆ ಮನ್ಷ ಅಲ್ಲವೇ ಅಲ್ಲ. ಅದರೂ ಒಂದೊಂದ್ಸಲ( ಕೆಲಸ ಇಲ್ದಾಗ, ಹೀಟದ ಕಣ್ಣುಗಳನ್ನು ಕೂಲ್ ಮಾಡೋಕೆ ), ಅದೂ ಸರಿಯಾಗಿ ಸೂರ್ಯ the great ನಮಗೆಲ್ಲ ಕಣ್ ಒಡೆಯೋ ಟೈಮಲ್ಲಿ ( ಅದೇ , 11 or 4 ಕ್ಕೆ ) ಹೋಗ್ತ್ಹಿರಿಥಿನಿ.



ಹೀಗೆ ಒಂದ್ಸಲ (ನೆನ್ನೆನೇ ಮಾರಾಯ ) ನನ್ನೆಲ್ಲ ಸಂಗಡಿಗರ ಜೊತೆ ಕೂತು ಕುಂಡಿ ಕಾಯ್ಸ್ತ ಇದ್ದೆ, ಅದೇ, ಕೆಲಸ ಇಲ್ದೆ. ನಮ್ಮ ಟೀಂ ಒಂಥರಾ ಭಾರತದ ಭೂಪಟ ಇದ್ದಂಗೆ. ನಾನೊಬ್ನೇ ಕರುನಾಡ ದರವೇಶಿ. ಒಬ್ಬ ಚೆನ್ನೈ ಚೆಲುವ, ಇನ್ನೊಬ್ಬ ಗುಂಟುರ್ ಗಿರಾಕಿ, ಮತ್ಹೊಬ್ಬ ಅಸಾಮಿ ( ಅದೇ, ಅಸ್ಸಾಮಿ ) ಇನ್ನೂ ಒಬ್ಬ ಗಡ್ಡ ಇಲ್ಲದ ಸರದಾರ.



ಆಗ ತಾನೆ ಮಳೆ ಹುಯ್ದು ಮುನಿಸಿಕೊಂಡಿತ್ತು. ಕಾಪಿ ಲೋಟಗಳು ಕೈ ಬಿಸಿ ಮಾಡ್ತಿದ್ವು.



ನಾನಂದೆ "yar ಈ ಟೈಮಲ್ಲಿ ಬಜ್ಜಿ ಇದ್ದಿದ್ರೆ ಸಕಥಗಿರೋದು ಅಲ್ವ? "



ಸರದಾರ " ಭಜ್ಜಿ ಯಾಕೆ?"



ನಾನು "ತಿನ್ನೋಕೆ"



ಅಸಾಮಿ ಸಿಟ್ಟಿನಿಂದ "ನರ್ ಭಕ್ಷಕ್ "



ನಾನ್ "ಹ್ಹೆ ! ಬಜ್ಜಿ ಅಂದ್ರೆ eating ಬಜ್ಜಿ, not doosra ಬಜ್ಜಿ"



ಅಲ್ಲಿವರ್ಗು ಚೆಲುವೆ ಜೊತೆ non ತಂತಿಲಿ ಬಿಜಿ ಇದ್ದ ಚೆಲುವ " yes yes , ಬಜ್ಜಿ ದೂಸ್ರ good " ಅನ್ನೋದೇ...



ಚೆಲುವನ್ ಮೇಲೆ ಗುಂಟುರ್ ಗೆ ಏನು ಸಿಟ್ಟೋ ... " ಬಜ್ಜಿ big ಬೇವರ್ಸಿ ವಾಲ್ಳು ನಾಟ್ ಬ್ಯಾಟ್ಟಿಂಗ್, ನಾಟ್ ಬೋಲಿಂಗ್ ... he ಇಸ್ ಇನ್ between ..." ಏನೋ ಅನ್ನೋಕೆ ಓಗಿ ಏನೋ ಅಂದ ...ಮೂತಿ ಸಿನ್ದಿರಿಸಿಕೊಂಡು.



punjab ka ಪುತ್ಹರ್ ಗೆ ಪಿತ್ತ ನೆತ್ತಿಗೇರಿತು " dont say like that ... ಅವರ್ PM ಇಸ್ ಸಿಂಗ್ ... ವರ್ಲ್ಡ್ ಕಪ್ ಮ್ಯಾನ್ ಆಫ್ ದಿ ಮ್ಯಾಚ್ ಇಸ್ ಸಿಂಗ್ .... ಸಿಂಗ್ ಇಸ್ ಕಿಂಗ್... ಜೈ "



ಅಸಾಮಿ ನಂದೆಲ್ಲಿ ಇಡ್ಲಿ ಅಂತ " ಯುವರ್ ಕಿಂಗ್ ಸ್ವಿಂಗ್ ಓನ್ಲಿ ವೆನ್ ಯುವರ್ queen ಸಿಂಗ್..."..ಬಹು ಅರ್ಥ ಗರ್ಭಿತವಾಗಿ.



ಚೆಲುವ ಇದ್ದೋನು " ಮೈ ಕಿಂಗ್ ಒನ್ ಪಾರ್ಟಿ , queen ಒನ್ ಪಾರ್ಟಿ... they fight everywhere ಆಲ್ ದಿ ಟೈಮ್ ".. ಬಿಡಿಸಿದರೆ ಆಗುವ ಅವಾಂತರ ಗೊತ್ತಾಗಿ ಎಲ್ಲ ಗಪ್ ಚುಪ್ !!!



ಸದನದ ಕಲಾಪ ಇಲ್ಲಿಗೆ ಮುಗ್ಸೋಣ ಅಂತ ನಾನಂದೆ " ಶಾಂತಿ, ಶಾಂತಿ , ಶಾಂತಿ"



ಅಸಾಮಿ "ಎಲ್ಲಿ ? ಎಲ್ಲಿ? ಎಲ್ಲಿ?"


---